ಅಡಪು 
	
ಈ ನಾಯಿಕಜ್ಜಿ ಮಾನವನಿಗೂ ಅಂಟಬಹುದು. ನೇರವಾಗಿ ನಾಯಿಯಿಂದಲೋ ಅದರ ತಳಹಾಸು, ಬಟ್ಟೆ ಬರೆ, ಕುಂಚಗಳ ಮೂಲಕವೊ ಬರಬಹುದು.  ಮೈಕೈಗೆಲ್ಲ ಹರಡುವುದು ಅಪೂರ್ವ.  ಕೈ ಬೆರಳುಗಳಿಗೆ ಅಂಟಿ ಕೆಲವು ಕಾಲ ಇದ್ದು ಹೋಗುವ ಅಂಟುರೋಗ, ಕಜ್ಜಿ ಹತ್ತಿಸುವ ಹುಳದ ಜಾತಿಗಳು ಒಂದೊಂದು ಪ್ರಾಣಿಯಲ್ಲೂ ಬೇರೆ ಬೇರೆ ಆಗಿರುವುದರಿಂದ ಇನ್ನೊಂದು ಪ್ರಾಣಿಯನ್ನು ಸೇರಿದಾಗ ಬೇಗನೆ ಸಾಯುತ್ತವೆ. ನಾಯಿಕಜ್ಜಿಯ ಹುಳ ಮಾತ್ರ ಹೀಗೆ ಬೇಗ ಸಾಯದು. ನಾಯಿಯಿಂದ ಬಂದ ಕಜ್ಜಿಗೂ ಮನುಷ್ಯನ ಕಜ್ಜಿಯ ಚಿಕಿತ್ಸೆಯೇ ಸಾಕಾಗುವುದು. 
	
ಕುರಿಗಳಲ್ಲಿ ಅಪೂರ್ವವಾಗಿ ಈ ಕಜ್ಜಿ ಅಂಟುವುದಾದರೂ ಸಾಕಿದ ಪ್ರಾಣಿಗಳಲ್ಲಿ ನಾಯಿ, ಬೆಕ್ಕು, ಕುದುರೆಗಳಲ್ಲಿ ಸಾಮಾನ್ಯ.  ದನಕರುಗಳಿಗೂ, ನರಿ, ಹಂದಿಗಳಿಗೂ ಹತ್ತಬಹುದು. ಹಕ್ಕಿಗಳಲ್ಲಿ ಕಜ್ಜಿ ಎದ್ದರೆ ಪುಕ್ಕಗಳು ಉದುರುತ್ತವೆ. ಒಂದೊಂದು ಪ್ರಾಣಿಯ ಕಜ್ಜಿಹುಳವೂ ಬೇರೆಯಾಗಿದ್ದರೂ ನಾಯಿಗೆ ಮಾತ್ರ ಎರಡು ಜಾತಿ ಹುಳದ ಕಜ್ಜಿ ಹತ್ತಬಹುದು. ಅದರಲ್ಲೂ ಕರಿಕಜ್ಜಿ ಹತ್ತಿದರಂತೂ ವಾಸಿಯಾಗುವುದು ತೀರ ಕಷ್ಟ.
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ